ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಶ್ರೀ ನಾರಾಯಣಗುರು ವಸತಿ ಶಾಲೆಯಲ್ಲಿ ಆರ್ಥಿಕ ಸಾಕ್ಷರತಾ ಅರಿವು" ಕಾರ್ಯಕ್ರಮ

ಶ್ರೀ ನಾರಾಯಣಗುರು ವಸತಿ ಶಾಲೆಯಲ್ಲಿ ಆರ್ಥಿಕ ಸಾಕ್ಷರತಾ ಅರಿವು" ಕಾರ್ಯಕ್ರಮ

Wed, 31 Jan 2024 00:22:10  Office Staff   SOnews

ಭಟ್ಕಳ: ತಾಲೂಕಿನ ಪುರವರ್ಗದಲ್ಲಿರುವ ಶ್ರೀ ನಾರಾಯಣಗುರು ವಸತಿ ಶಾಲೆಯಲ್ಲಿ ಕೆ.ಡಿ.ಸಿ.ಸಿ. ಬ್ಯಾಂಕ್ ಲಿ. ಶಿರಸಿ ಹಾಗೂ ನಬಾರ್ಡ್ನ ಸಹಯೋಗದೊಂದಿಗೆ ವಿದ್ಯಾರ್ಥಿಗಳಿಗೆ "ಆರ್ಥಿಕ ಸಾಕ್ಷರತಾ ಅರಿವು" ಕಾರ್ಯಕ್ರಮ ನಡೆಯಿತು. 

ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಯಾಗಿ ಕೆ.ಡಿ.ಸಿ.ಸಿ.ಬ್ಯಾಂಕಿನ ಪ್ರಧಾನ ಕಚೇರಿಯ ವಿಭಾಗಾಧಿಕಾರಿ ಲೋಕೇಶ್ ಶಿರೂರು ಉಪಸ್ಥಿತರಿದ್ದರು. 

ಕೆ.ಡಿ.ಸಿ.ಸಿ. ಬ್ಯಾಂಕಿನ ಹಿರಿಯ ಸಿಬ್ಬಂದಿ ಶ್ವೇತಾ ದೈಮನೆ ಸಂಪನ್ಮೂಲ ವ್ಯಕ್ತಿಗಳಾಗಿ ಉಪಸ್ಥಿತರಿದ್ದು ವಿದ್ಯಾರ್ಥಿಗಳಿಗೆ ಇಂದಿನ ದಿನಗಳಲ್ಲಿ ಬ್ಯಾಂಕಿಗ್ ಅವಶ್ಯಕತೆ, ಬ್ಯಾಂಕಿನ ದಿನದ ಸಂಪೂರ್ಣ ವ್ಯವಹಾರ, ಬ್ಯಾಂಕ್‌ಗಳಲ್ಲಿ ತೆರೆಯಬಹುದಾದ ವಿವಿಧ ಖಾತೆಗಳು ಹಾಗೂ ಅದರ ಉಪಯೋಗ, ಡಿಜಿಟಲ್ ಬ್ಯಾಂಕಿAಗ್, ಮೊಬೈಲ್ ಬ್ಯಾಂಕಿAಗ್, ಗಣಕೀಕೃತ ಸೌಲಭ್ಯಗಳು, ಶೈಕ್ಷಣಿಕ ಸಾಲ, ಸೈಬರ್ ಕ್ರೆöÊಂ ಮತ್ತು ವಿದ್ಯಾರ್ಥಿಗಳಿಗೆ ಅನೂಕೂಲವಾಗ ಬಹುದಾದ ಉಳಿತಾಯ ಖಾತೆಯ ಬಗ್ಗೆ ಮಾಹಿತಿ ನೀಡಿದರು. ಕಾರ್ಯಕ್ರಮದ ಕೊನೆಯಲ್ಲಿ ವಿದ್ಯಾರ್ಥಿಗಳೊಂದಿಗೆ ನೇರ ಸಂವಾದ ಕಾರ್ಯಕ್ರಮ ನಡೆಯಿತು. ಕುಮಾರಿ ಛಾಯಾ ಹಾಗೂ ಕುಮಾರ ಮಂಜುನಾಥ ಕಾರ್ಯಕ್ರಮದ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊAಡರು. ವಸತಿ ಶಾಲೆಯ ಪ್ರಾಂಶುಪಾಲ ಆರ್.ಕೆ.ನಾಯ್ಕ ಸ್ವಾಗತಿಸಿದರು. ಶಿಕ್ಷಕ ಅನಿಲ್ ದೇಶಭಂಡಾರಿ ನಿರ್ವಹಿಸಿದರು. ಶಿಕ್ಷಕ ವೆಂಕಟೇಶ ಮುಕ್ರಿ ವಂದಿಸಿದರು. 

 


Share: